ವಿಷಯಕ್ಕೆ ಹೋಗಿ

ವೈಶಿಷ್ಟ್ಯವಾಗಿರುವುದು

ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಕಿಂಗ್ ಕೊಹ್ಲಿ!

ಕ್ರಿಕೆಟ್ ಲೋಕದ ಕಿಂಗ್ ಅಂತಲೇ ಕರೆಯಲ್ಪಡುತ್ತಿರುವ ವಿರಾಟ್ ಕೊಹ್ಲಿ ತನ್ನ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದ್ಯಾವುದೇ ಸರಣಿಯಿರಲಿ, ಪಂದ್ಯವಿರಲಿ; ಕೊಹ್ಲಿ ಹೆಸರಿನಲ್ಲಿ ಒಂದಿಲ್ಲೊಂದು ದಾಖಲೆಗಳು ನಿರ್ಮಾಣವಾಗುತ್ತಲೇಯಿವೆ. ಈಗ ಕೊಹ್ಲಿ ಮತ್ತೊಂದು ವಿಶೇಷ ದಾಖಲೆಗೆ ಬಹಳ ಸನಿಹದಲ್ಲಿದ್ದಾರೆ. ಕಳೆದ ವರ್ಷ ವಿಶ್ವಕಪ್ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಕೊಹ್ಲಿ ಧೂಳೀಪಟಗೊಳಿಸಿದ್ದರು. ಏಕದಿನ ವಿಶ್ವಕಪ್ ನಲ್ಲಿ 50ನೇ ಶತಕ ಸಿಡಿಸಿದ್ದ ಕೊಹ್ಲಿ, ಸಚಿನ್ ಅವರ ಹೆಸರಿನಲ್ಲಿದ್ದ 49 ಏಕದಿನ ಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದರು. ಇನ್ನು ಜನವರಿ 25ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಮತ್ತೊಂದು ದಾಖಲೆ ನಿರ್ಮಿಸಲು ಕೊಹ್ಲಿ ಮುಂದಾಗಿದ್ದಾರೆ. ಜನವರಿ 25ರಿಂದ ಭಾರತದಲ್ಲಿ ಇಂಗ್ಲೆಂಡ್ ಮತ್ತು ಆತಿಥೇಯ ಭಾರತದ ಮಧ್ಯೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯ ವೇಳೆ ಕೊಹ್ಲಿಯೇನಾದ್ರೂ 152 ರನ್ ಬಾರಿಸಿದ್ರೆ ಟೆಸ್ಟ್ ವೃತ್ತಿ ಬದುಕಿನಲ್ಲಿ 9,000 ರನ್ ಮೈಲಿಗಲ್ಲು ಸ್ಥಾಪಿಸಿದ ಸಾಧನೆಗೆ ಕಿಂಗ್ ಕೊಹ್ಲಿ ಪಾತ್ರರಾಗಲಿದ್ದಾರೆ. ಸದ್ಯ 113 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 30 ಅರ್ಧ ಶತಕ, 29 ಶತಕ ಮತ್ತು 7 ದ್ವಿಶತಕಗಳ ಸಹಿತ ಒಟ್ಟು 8,848 ರನ್ ಬಾರಿಸಿದ್ದಾರೆ. ಅಂದ್ಹಾಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗ...

ಪ್ರಪಂಚದ ದುಬಾರಿ ಮಾವುಗಳಿವು.. ಇದರ ಬೆಲೆಯೆಷ್ಟು ಗೊತ್ತಾ?!


ನೀವು ಮಿಯಾಝಾಕಿ ಮಾವುಗಳ ಬಗ್ಗೆ ಕೇಳಿದ್ದೀರಾ? ನೀವೊಂದು ವೇಳೆ ಸೋಷಿಯಲ್ ಮೀಡಿಯಾವನ್ನು ಹೆಚ್ಚಾಗಿ ಗಮನಿಸ್ತಿರುವವರು ಆಗಿದ್ರೆ, ನೀವು ಈ ಮಿಯಾಝಾಕಿ ಮಾವಿನ ಬಗ್ಗೆ ಕೇಳಿರುವ ಸಾಧ್ಯತೆ ಹೆಚ್ಚಿರುತ್ತದೆ. ಅಂದ್ಹಾಗೆ, ಈ ಮಾವಿಗೆ ಜಗತ್ತಿನ ಅತೀ ದುಬಾರಿ ಮಾವು ಎನ್ನುವ ಖ್ಯಾತಿಯೂ ಇದೆ.

ಇತ್ತೀಚೆಗೆ ANIನಲ್ಲಿ ಹಾಕಲಾಗಿದ್ದ ಪೋಸ್ಟ್​ ಒಂದರಲ್ಲಿ, ವೆಸ್ಟ್​ ಬೆಂಗಾಲ್​ನ ಸಿಲಿಗುರಿಯಲ್ಲಿ ನಡೆದ 7ನೇ ಮಾವಿನ ಉತ್ಸವದಲ್ಲಿ ಪ್ರದರ್ಶಿಸಲಾದ ವಿಶ್ವದ ಅತ್ಯಂತ ದುಬಾರಿ ಮಿಯಾಝಾಕಿ ಮಾವಿನ ಬೆಲೆ ಮಾರುಕಟ್ಟೆಯಲ್ಲಿ ಕೆಜಿಗೆ ಸುಮಾರು 2.75 ಲಕ್ಷ ರೂಪಾಯಿಯಷ್ಟಿದೆ ಅಂತ ಬರೆಯಲಾಗಿತ್ತು. ಈ ಮಿಯಾಝಾಕಿ ಮಾವಿನ ಬೆಲೆ ಅದೆಷ್ಟು ದುಬಾರಿ ಅನ್ನೋದನ್ನು ನೀವು ಇದರಲ್ಲೇ ಅರ್ಥ ಮಾಡಿಕೊಳ್ಳಬಹುದು. 


ಸಾಮಾನ್ಯವಾಗಿ ಜಪಾನ್​ನಲ್ಲಿ ಕಾಣಸಿಗುವ ಈ ಮಿಯಾಝಾಕಿ ಮಾವಿನ ಹಣ್ಣನ್ನು ಸದ್ಯ ಭಾರತದಲ್ಲಿಯೂ ಕೆಲವೆಡೆ ಬೆಳೆಸಲಾಗ್ತಿದೆ. ವೆಸ್ಟ್​ ಬೆಂಗಾಲ್​ನ ದುಬ್ರಾಜ್​ಪುರ್​ನಲ್ಲಿ ಈ ಮಾವಿನ ತೋಟವಿದ್ದು, ಈ ತೋಟ ಪ್ರವಾಸಿಗರನ್ನು ಆಕರ್ಷಿಸ್ತಿದೆ. ಸಾಮಾನ್ಯವಾಗಿ ಏಪ್ರಿಲ್-ಆಗಸ್ಟ್​ನಲ್ಲಿ ಈ ಹಣ್ಣಿನ ಇಳುವರಿ ಜಾಸ್ತಿ ಅಂತ ಹೇಳಲಾಗ್ತಿದೆ.

ಮಿಯಾಝಾಕಿ ಮಾವು ಪಕ್ವವಾಗುತ್ತಾ ಬಂದಾಗ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಒಂದು ಹಣ್ಣು ಸುಮಾರು 350 ಗ್ರಾಮ್​​ ತೂಗುವ ಈ ಹಣ್ಣಿಗೆ ಭಾರತದಲ್ಲಿ ಕೆಜಿಗೆ 3 ಲಕ್ಷದವರೆಗೂ ಬೆಲೆಯಿದೆ ಅಂದರೆ ನೀವು ನಂಬಲೇಬೇಕು.

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು